ಭಟ್ಕಳ: ೨೬,ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ ತಿಂಗಳ ಎರಡನೇ ವಾರದಂದು ನಡೆಸಲು ಸಾಹಿತ್ಯ ಪರಿಷತ್ ನಿರ್ಧರಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಆರ್.ವಿ.ಸರಾಫ್ ತಿಳಿಸಿದ್ದಾರೆ.
ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿಸಲು ಭಟ್ಕಳದ ಶಾಸಕ ಜೆ.ಡಿ.ನಾಯ್ಕರವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಸಹಾಯಕ ಕಮಿಷನರ್ ಡಾ. ಕೆ.ವಿ. ತ್ರಿಲೋಕಚಂದ್ರ ಪ್ರಧಾನ ಕಾರ್ಯದರ್ಶಿಯಾಗಿ, ತಾಲೂಕಾ ಪಂಚಾಯತ್ ಅಧ್ಯಕ್ಷೆ ಗೌರಿ ಮೊಗೇರ ಹಾಗೂ ಪುರಸಭಾಧ್ಯಕ್ಷ ಪರ್ವೇಜ್ ಕಾಶಿಮಜಿ ಉಪಾಧ್ಯಕ್ಷರಾಗಿ, ತಹಸೀಲ್ದಾರ್ ಎಸ್.ಎಂ. ನಾಯ್ಕ ಮತ್ತು ಕ.ಸಾ.ಪ. ಅಧ್ಯಕ್ಷ ಡಾ. ಆರ್.ವಿ.ಸರಾಫ್ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಡಿ.ವೈ.ಎಸ್.ಪಿ. ಡಾ. ಸಿ.ಬಿ.ವೇದಮೂರ್ತಿ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಉದಯ ನಾಯಕ ಅವರು ಸಂಚಾಲಕರಾಗಿದ್ದು ಸರಕಾರಿ ಅಧಿಕಾರಿಗಳೆಲ್ಲರೂ ಸದಸ್ಯರುಗಳನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
ನಾಗರಿಕರು, ಸಂಘ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುವುದರೊಂದಿಗೆ ತಾಲೂಕಾ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂದು ಅವರು ಕೋರಿದ್ದಾರೆ
ಪಾಶ್ವðವಾಯು ಪೀಡಿತರಿಗೆ ಮಾಸಾಶನ
¨ಭಟ್ಕಳ:೨೬,ತಾಲೂಕಿನ ಮಾವಿನಕುರ್ವೆ ಬಂದರದಲ್ಲಿನ ಪಾರ್ಶ್ವವಾಯು ಪೀಡಿತ ೩೯ ಮಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ ತಲಾ ಆರು ನೂರು ರೂಪಾಯಿಯಂತೆ ಮಾಸಾಸನ ನೀಡುವ ಕಾರ್ಯಕ್ರಮಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.
ಮಾವಿನಕುರ್ವೆಯ ಸಾಯಿಮಂದಿರದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬೂದಪ್ಪ ಗೌಡ ಮಾತನಾಡಿದ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ ಸಮುದಾಯದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಮಾವಿನಕುರ್ವೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪಾರ್ಶ್ವವಾಯು ರೋಗ ಇದ್ದು, ೩೯ ಮಂದಿಗೆ ಈ ರೋಗ ತಗುಲಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ. ಇವರಿಗೆ ಔಷಧೋಪಚಾರಕ್ಕೆ ಸಹಾಯವಾಗಲು ಒಂದು ವರ್ಷದ ವರೆಗೆ ಪ್ರತಿ ತಿಂಗಳಿಗೆ ತಲಾ ಆರು ನೂರು ರೂಪಾಯಿಯಂತೆ ಒಟ್ಟೂ ೨,೮೦೮೦೦ ರೂ ಮಾಸಾಸನ ನೀಡಲು ಯೋಜನೆಯಡಿಯಲ್ಲಿ ನಿರ್ಧರಿಸಲಾಗಿದೆ. ಇದು ಕಿಂಚಿತ್ ಸಹಾಯವಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಈ ರೋಗ ಹರಡಲು ಕಾರಣವೇನು? ಇದು ಆಹಾರದಿಂದ, ಮಣ್ಣಿನಿಂದ ಅಥವಾ ನೀರಿನಿಂದ ಹರಡುತ್ತಿದೆಯೇ ಎಂಬುದರ ಕುರಿತು ವೈಜ್ಞಾನಿಕವಾಗಿ ಸಂಶೋಧನೆ ನಡೆಸಲು ಯೋಜನೆಯ ವತಿಯಿಂದ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂಬ ಭರವಸೆ ನೀಡಿದರು. ಉಪಸ್ಥಿತರಿದ್ದ ಖಾರ್ವಿ ಸಮಾಜದ ಮುಖಂಡ ವಸಂತ ಖಾರ್ವಿ ಮಾತನಾಡಿ ಹಲವಾರು ಬಾರಿ ಸರಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಬೆಳಕೆ ಶಾಲೆಯ ಶಿಕ್ಷಕ ದಂಪತಿಗಳು ಹಾಗೂ ವಿದ್ಯಾರ್ಥಿಗಳು ಇಲ್ಲಿನ ರೋಗದ ಬಗ್ಗೆ ಸಮೀಕ್ಷೆ ನಡೆಸಿ ವರದಿಯನ್ನು ಧರ್ಮಸ್ಥಳಕ್ಕೆ ಕಳುಹಿಸಿದ್ದರು. ಗ್ರಾಮದ ಜನರು ಈ ರೋಗದಿಂದ ನರಕಯಾತನೆ ಅನುಭವಿಸುತ್ತಿರುವುದನ್ನು ಕಂಡು ಯೋಜನೆಯಿಂದ ಮಾಸಾಸನ ನೀಡಲಾಗಿದೆ. ಮಾಸಾಸನವನ್ನು ನಿರಂತರವಾಗಿ ನೀಡಿದರೆ ಉತ್ತಮ. ಪಾರ್ಶ್ವವಾಯು ಯಾಕಾಗಿ ಹರಡುತ್ತಿದೆ ಎಂಬುದರ ಕುರಿತು ಸಂಶೋಧನೆ ಮಾಡಿ ಶಾಶ್ವತ ಪರಿಹಾರ ಸರಕಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಉಪಸ್ಥಿತರಿದ್ದ ನಾರಾಯಣ ಖಾರ್ವಿ, ಯೋಜನೆಯ ಮೇಲ್ವಿಚಾರಕ ಗಣೇಶ ಬಿ ಮಾತನಾಡಿದರು. ವೇದಿಕೆಯಲ್ಲಿ ಮಂಜುನಾಥ ಖಾರ್ವಿ,ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷ ಗೋವಿಂದ ಖಾರ್ವಿ,ತಿಮ್ಮಪ್ಪ ಖಾರ್ವಿ ಉಪಸ್ಥಿತರಿದ್ದರು. ಇದೇ ಸಂದರ್ಬದಲ್ಲಿ ಪಾರ್ಶ್ವವಾಯು ಪೀಡಿತರಿಗೆ ಮಾಸಾಸನ ನೀಡಲಾಯಿತು. ಯೋಜನೆಯ ಸೇವಾನಿರತ ಗಜಾನ ಪಟಗಾರ ಸ್ವಾಗತಿಸಿ, ನಿರೂಪಿಸಿದರು.
ಜಿಲ್ಲಾಧಿಕಾರಿ ಚೆನ್ನಪ್ಪಗೌಡ ಭಟ್ಕಳಕ್ಕೆ ಭೇಟಿ.
ಭಟ್ಕಳ:೨೬ ಇತ್ತಿಚೆಗೆ ಭಟ್ಕಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಚೆನ್ನಪ್ಪ ಗೌಡರು ಭಟ್ಕಳ ತಾಲೂಕಿನ ವಿವಿಧ ಸಮಸ್ಯೆಗಳ ಕುರಿತು ಪರಿಶೀಲನೆಯನ್ನು ನಡೆಸಿದರು. ಇಲ್ಲಿನ ಅರಣ್ಯ ಅತಿಕ್ರಮಣ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಜಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಅತಿಕ್ರಮಣ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಜಾಲಿಯಲ್ಲಿ ಅರಣ್ಯ ಭೂಮಿಯಲ್ಲಿ ಅತಿಕ್ರಮಣ ನಡೆಸಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಕಾಯ್ದಿಟ್ಟ ಅರಣ್ಯ ಭೂಮಿಯಲ್ಲೂ ಸಹ ಕೆಲವರು ಅತಿಕ್ರಮಣಕ್ಕೆ ಮುಂದಾಗಿದ್ದು, ಈ ಭೂಮಿಯಲ್ಲಿ ಗಿಡಗಳನ್ನು ನೆಡಬೇಕಾಗಿದೆ ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಚೆನ್ನಪ್ಪ ಗೌಡರು ಯಾವುದೇ ಕಾರಣಕ್ಕೂ ಅರಣ್ಯ ಭೂಮಿಯಲ್ಲಿ ಅತಿಕ್ರಮಣ ನಡೆಸಲು ಬಿಡುವುದಿಲ್ಲ ಎಂಬ ಭರವಸೆ ನೀಡಿದರು.
ನಂತರ ಇಲ್ಲಿನ ಸರಕಾರಿ ಆಸ್ಪತ್ರೆಗೂ ಭೇಟಿಯನ್ನು ನೀಡಿ ಅಲ್ಲಿನ ವ್ಯವಸ್ಥೆಯ ಕುರಿತು ವೈದ್ಯಾಧಿಕಾರಿ ಡಾ. ಮಂಜುನಾಥ್ ರೊಂದಿಗೆ ಮಾತುಕತೆ ನಡೆಸಿದರು.
ಹೋಟೆಲ್ ಗೆ ಬೆಂಕಿ ಸಕಾಲಕ್ಕೆ ಬಂದ ಅಗ್ನಿಶಾಮಕ ದಳ ತಪ್ಪಿದ ದುರಂತ
ಭಟ್ಕಳ: ೨೬,ಜಾಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಜಾದ ನಗರದ ಹೊಟೆಲ್ ವೊಂದರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ಯನ್ನು ನಂದಿಸುವುದರ ಮೂಲಕ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಗುರುವಾರ ರಾತ್ರಿ ಹೊಟೆಲ್ನಲ್ಲಿನ ಗ್ಯಾಸ್ ಸಿಲೆಂಡರ್ ಸ್ಟವ್ನ ಪೈಪ್ ರಂಧ್ರದಿಂದಾಗಿ ಆಕಸ್ಮಿಕ ಬೆಂಕಿ ತಗುಲಿದೆ ಎಂದು ಹೇಳಲಾಗಿದೆ ಈ ಅಕಸ್ಮಿಕ ಬೆಂಕಿಯಿಂದಾಗಿ ಯಾವುದೆ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.